ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ: ಆರ್ ಅಶೋಕ್ ಸವಾಲು

ಸಂಸದ ಅನಂತಕುಮಾರ್ ಹೆಗಡೆ ಹುಚ್ಚ, ಅವನಿಗೆ ಸಂಸ್ಕೃತಿ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್​ಗೆ ಗತಿ ಇಲ್ಲದ 13 ಲೋಕಸಭಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ, ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದರು. ಅಲ್ಲದೆ, ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ: ಆರ್ ಅಶೋಕ್ ಸವಾಲು
ಆರ್ ಅಶೋಕ್ ಮತ್ತು ಮಧು ಬಂಗಾರಪ್ಪ
Follow us
| Updated By: Rakesh Nayak Manchi

Updated on:Jan 20, 2024 | 6:28 PM

ಹಾವೇರಿ, ಜ.20: ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಹುಚ್ಚ, ಅವನಿಗೆ ಸಂಸ್ಕೃತಿ ಇಲ್ಲ ಎಂದು ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ (Madhu Bangarappa) ಅವರಿಗೆ ಮಾತಿನಲ್ಲೇ ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್​.ಅಶೋಕ್ (R Ashok), ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಅಲ್ಲದೆ, ಗತಿ ಇಲ್ಲದ 13 ಲೋಕಸಭಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಹಾವೇರಿಯಲ್ಲಿ ಮಾತನಾಡಿದ ಆರ್. ಅಶೋಕ್, ಮಧು ಬಂಗಾರಪ್ಪ ಇದೆ ಮೊದಲ ಬಾರಿಗೆ ಶಾಸಕರಾಗಿದ್ದಾರೋ ಏನೋ.. ನನಗೆ ಗೋತ್ತಿಲ್ಲಾ. ಅನಂತ್ ಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾರವಾರದ ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಕಾರವಾರ ಜನರಿಗೆ ಅವಮಾನ ಆಗುವಂತ ಹೇಳಿಕೆ ಮಧು ಬಂಗಾರಪ್ಪ ನೀಡಿದ್ದಾರೆ ಎಂದರು.

ಮಧು ಬಂಗಾರಪ್ಪ ಬಿಜೆಪಿಗೆ ಸೇರಿದ ನಂತರ ಟಿಕೆಟ್​ ಹಂಚಿಕೆ ತಂಡದಲ್ಲಿದ್ದರೆ ಮಾತನಾಡಲಿ. ಸದ್ಯ ಅವರು ಕಾಂಗ್ರೆಸ್​ನಲ್ಲಿದ್ದು, ಅವರ ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ನೋಡಿಕೊಳ್ಳಲಿ. ಇತ್ತೀಚಿಗೆ, ಕಾಂಗ್ರೆಸ್​ನಲ್ಲಿ 13 ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸೂಕ್ತ ಅಭ್ಯರ್ಥಿಗಳೇ ಇಲ್ಲ ಎಂದು ವರದಿಯಾಗಿದೆ. ಇಂತಹ ಗತಿಯಿಲ್ಲದ ಕ್ಷೇತ್ರಗಳಿಗೆ ಟೀಕೆಟ್ ನೀಡಲಿ. ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದರು.

ಇದನ್ನೂ ಓದಿ: ಅನಂತಕುಮಾರ ಹೆಗಡೆ ನಾಲ್ಕು ವರ್ಷ ನಾಪತ್ತೆಯಾಗಿ ಕ್ಷೇತ್ರದ ಮತದಾರನಿಗೆ ದ್ರೋಹವೆಸಗಿದ್ದಾರೆ: ಮಧು ಬಂಗಾರಪ್ಪ, ಸಚಿವ

ವೋಟ್ ಹಾಕಿ ಗೆಲ್ಲುಸುವುದು ಮತದಾರು. ಮಧು ಬಂಗಾರಪ್ಪ ಅಲ್ಲ. ತಿರ್ಮಾನ ತೆಗೆದುಕೊಳ್ಳವುದು ಪ್ರಜ್ಞಾವಂತ ಮತದಾರರು. ಏನು ತೀರ್ಮಾನ ತೆಗೆದು ಕೊಳ್ಳುತ್ತಾರೋ ತೆಗೆದು ಕೊಳ್ಳಲಿ. ಐದು ಬಾರಿ ತೀರ್ಮಾನ ಕೊಟ್ಟಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಟಿಕೇಟ್ ಕೊಡುವುದು ಬಿಡುವುದು ಬಿಜೆಪಿ ಹೈ ಕಮಾಂಡ್ ಬಿಟ್ಟ ವಿಚಾರ. ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ. ನಂತರ ಬೇರೆ ಕ್ಷೇತ್ರದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಸೋಲಿನ ಭಯದಲ್ಲಿ ಮಧು ಬಂಗಾರಪ್ಪ ಹಾಗೆಲ್ಲಾ ಮಾತನಾಡುತ್ತಿದ್ದಾರೆ. ದೇಶದಲ್ಲಿ ರಾಮನ ಅಲೇ ಶುರುವಾಗಿದೆ. ಎಲ್ಲಿ ನೋಡಿದರೂ ರಾಮ ರಾಮ ಅಂತಾ ಹೇಳುತ್ತಿದ್ದಾರೆ. ಇವರು ಕೇವಲ ಅಲ್ಪಸಂಖ್ಯಾತರು, ಮುಸ್ಲಿಮರು, ಎಲ್ಲರು ನಮ್ಮ ಬ್ರದರ್ಸ್ ಸಿಸ್ಟರ್ಸ್ ಅಂಥಾ ಹೇಳುತ್ತಿದ್ದಾರೆ. ಅವರು ಬ್ರದರ್ಸ್ ಸಿಸ್ಟರ್ಸ್ ನೋಡಿಕೊಂಡು ಇರಲಿ. ದೇಶದ ಜನ ಮೋದಿಯನ್ನು ಆರಿಸಿ ತರುತ್ತಾರೆ ಎಂದರು.

ಹಾನಗಲ್ ಗ್ಯಾಂಗರೇಪ್ ಪ್ರಕರಣ: ಬಿಜೆಪಿ ಬೃಹತ್ ಪ್ರತಿಭಟನೆ

ಹಾನಗಲ್​ನಲ್ಲಿ ನಡೆದ ಗ್ಯಾಂಗರೇಪ್ ಪ್ರಕರಣ ಸಂಬಂಧ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಅಶೋಕ್, ಬಹಳಷ್ಟು ಅತ್ಯಾಚಾರ ಘಟನೆ ನಡೆದಿವೆ. ನಾವು ಪತ್ರಿಭಟನೆ ಮಾಡುತ್ತಿದ್ದೇವೆ. ಏಳು ಜನರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಅದರೆ ಗ್ಯಾಂಗರೇಪ್ ಪ್ರಕರಣವನ್ನ ಸರ್ಕಾರ ಮುಚ್ಚಿ ಹಾಕುವ ಪಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ, ತಳ್ಳಾಡಿದ್ದಾರೆ, ನೂಕಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಸರಿಯಾದ ತನಿಖೆ ಮಾಡಿದ್ದರೆ ಅಂದೇ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಬಹುದಿತ್ತು. ಈ ಪ್ರಕರಣದಲ್ಲಿ 25 ಜನರು ಭಾಗಿಯಾಗಿದ್ದಾರೆ. ಸಂತ್ರಸ್ತೆ ಪತಿ ಧೈರ್ಯ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲವಾದರೆ ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಮಾಡುತ್ತಿತ್ತು ಎಂದರು.

ಇದನ್ನೂ ಓದಿ: ನಿದ್ದೆ ಮಾಡುವುದಕ್ಕೆ ನೀವೇ ಬ್ರ್ಯಾಂಡ್ ಅಂಬಾಸಿಡರ್, ನಿದ್ದೆರಾಮಯ್ಯ ಎಂದೇ ನಿಮಗೆ ಹೆಸರಿದೆ: ಆರ್ ಅಶೋಕ್

ಗ್ಯಾಂಗ್ ರೇಪ್ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಕೆಲಸ ಮಾಡಿದೆ. ಪ್ರಕರಣದ ಬಗ್ಗೆ SIT ತನಿಖೆ ಮಾಡಬೇಕು. ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕುವಲ್ಲಿ ಭಾಗಿಯಾಗಿದ್ದಾರೆ. ಇದು ನೈತಿಕ ಪೊಲೀಸಗಿರಿ ಅಲ್ಲ. ಗ್ಯಾಂಗರೇಪ್ ಪ್ರಕರಣವಿದು. ಅಧಿವೇಶನದಲ್ಲಿ ಚರ್ಚೆ ಆಗುತ್ತದೆ ಎಂದು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. SIT ತನಿಖೆಯಾಗಬೇಕು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾನು ಸಹ ಎಸ್ಐಟಿ ನೀಡಬೇಕು ಒತ್ತಾಯ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಒಂದು ದಿನವೂ ಅಧಿಕಾರ ಮಾಡುವ ಹಕ್ಕನ್ನ ಕಳೆದುಕೊಂಡಿದೆ ಎಂದರು.

ಈಡಿ ರಾಜ್ಯಕ್ಕೆ ಅವಮಾನ ತರುವ ಘಟನೆ ಇದಾಗಿದೆ. ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳು ಬಸ್​ ನಿಲ್ದಾಣದಲ್ಲಿ ಇರುವ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಿದ್ದಾರೆ. ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆಗಳ ಕೈವಾಡ ಇದೆ ಎಂದು ಆರೋಪಿಸಿದರು.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sat, 20 January 24

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು